ಕ್ಲೇಟನ್ಸ್ ಸಿದ್ಧಾಂತ

ಕ್ರಿ.ಶ. 1816 ರಲ್ಲಿ ದೇವೇನ್ಸ್ ಹಾಗು ನೋಬೆಲ್ ವಿರುದ್ಧದ ಕ್ಲೇಟನ್ಸ್ ದಾವೆಯು ಇಂಗ್ಲೆಂಡಿನಲ್ಲಿ ನಡೆಯಿತು. ಅದರಲ್ಲಿನ ತೀರ್ಪು ಒಂದು ಐತಿಹಾಸಿಕ ಮಹತ್ವದ್ದಾಯಿತು. ಮುಂದಿನ ನೂರಾರು, ಸಾವಿರಾರು ನ್ಯಾಯಾಲಯದ ಅಂತಹ ದಾವೆಗಳಿಗೆ ಇದು ಒಂದು ಮಾರ್ಗದರ್ಶಿಯಾಯಿತು.  ಈ ದಾವೆಯಲ್ಲಿ ನ್ಯಾಯಾಲಯವು ನೀಡಿದ ತೀರ್ಪು ಏನೆಂದರೆ, ಚಾಲ್ತಿ ಖಾತೆಗಳಲ್ಲಿ ಗ್ರಾಹಕರು ಹಲವಾರು ಬಾರಿ ಖಾತೆಗೆ ಖರ್ಚು ಹಾಕಿಸಿ ಪಾವತಿಯನ್ನು ಪಡೆದಿರುತ್ತಾರೆ. ಅಂತಹ ಪಾವತಿಗಳನ್ನು ಅದೇ ಕ್ರಮದಲ್ಲಿ ಮೊದಲು ಬಂದ ಜಮವು ಮೊದಲ ಖರ್ಚನ್ನು ತಾನೇತಾನಾಗಿ ಚುಕ್ತಾ ಮಾಡಿದಂತೆ ಭಾವಿಸುವುದೇ ಈ ನಿರ್ಣಯದ ಅಂತರಾಳ.  
ಇದು ನ್ಯಾಯಾಲಯದಲ್ಲಿನ ದಾವೆ ದಾಖಲಾದುದರ ಅಧಿಕೃತ ವಿವರಣೆ ಹಾಗು ಕ್ರಮ ಸಂಖ್ಯೆ :: Devaynes v. Noble; Clayton's Case (1816), 1 Mer. 572, 35 E.R. 781.]

ಈ ಕ್ಲೇಟನ್ನಿನ ದಾವೆಯಲ್ಲಿ ನಿರ್ಧರಿತವಾದುದು ಇಡೀ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಹೊಸ ಚಿಂತನೆಯನ್ನು ಸೃಷ್ಟಿಸಿತು. ಬಂದ ಜಮಾ ಹಣವನ್ನು ಆತನ ಸಾಲಕ್ಕೆ ವಿಶೇಷವಾಗಿ ಚಾಲ್ತಿ ಠೇವಣಿ ಖಾತೆಗೆ ಹೇಗೆ ಸೂಕ್ತವಾಗಿ ಬಳಸಿ ಕೊಳ್ಳುವುದು ಎಂಬುದನ್ನು ನಿರ್ಧರಿಸಲು ಕೆಲವು ನಿಯಮಗಳಿವೆ. 
1. ಗ್ರಾಹಕನ ಹಕ್ಕು ಹಾಗು ಯುಕ್ತೋಪಯೋಗವು ಮೊದಲ ಹಕ್ಕು :

ಅ). ಜಮಾ ಹಣವನ್ನು ತನಗೆ ತಿಳಿದಂತೆ ತನ್ನ ಬೇಕಾದ ಸಾಲಕ್ಕೆ ಜಮಾ ಮಾಡುವ ಹಕ್ಕನ್ನು ಸಾಲಗಾರನಿಗೆ ಆದ್ಯತೆ ಮೇಲೆ ನೀಡಲಾಗಿದೆ. 
ಬ) ಸಾಲಗಾರನು ಈ ಜಮೆಯ ಹಣದ ಯುಕ್ತವಾದ ಉಪಯೋಗದ ಸಮಯದಲ್ಲಿ ತನ್ನ ಹಕ್ಕನ್ನು ಚಲಾಯಿಸಬೇಕು ಇಲ್ಲದಿದ್ದಲ್ಲಿ ಅದು ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತದೆ.
ಕ). ಸಾಲಗಾರನು ತನಗೆ ಬಂದ ಜಮೆಯ ಹಣವನ್ನು ತನ್ನ ನಿರ್ಧಾರದಂತೆ ನಿರ್ದಿಷ್ಟ ಚೆಕ್ಕುಗಳ ಪಾವತಿಗಾಗಿ ಮೀಸಲಿಟ್ಟುಕೊಳ್ಳಬಹುದು; ಖಾತೆಯು ಮೀರೆಳೆದಿದ್ದರೂ ಇದು ಅನ್ವಯವಾಗುತ್ತದೆ. 
2. ಯುಕ್ತೋಪಯೋಗದ ಹಕ್ಕಿನಲ್ಲಿನ ಎರಡನೆಯ ನಿಯಮ :
1. ಸಾಲಗಾರನು ಈ ಜಮೆ ಹಣವನ್ನು ಯಾವ ಸಾಲಕ್ಕೆ ಬಳಸುವುದೆಂಬುವ ತನ್ನ ಹಕ್ಕನ್ನು ಸಾಲಗಾರನು ಚಲಾಯಿಸುವುದರಲ್ಲಿ ವಿಫಲನಾದಲ್ಲಿ, ಸಾಲದಾತನಿಗೆ ಈ ಹಕ್ಕು ಸಹಜವಾಗಿ ವರ್ಗಾವಣೆಯಾಗುತ್ತದೆ. ಕಾಲ ಮೀರಿದ ಸಾಲವೂ ಸೇರಿದಂತೆ ತನಗಿಷ್ಟ ಬಂದ ಸಾಲಕ್ಕೆ ಜಮೆಯನ್ನು ಬಳಸುವ ಹಕ್ಕನ್ನು ಚಲಾಯಿಸಬಹುದಾಗಿದೆ.
2. ಈ ಸಾಲದ ಬಗ್ಗೆ ಯಾವುದೇ ಕಾನೂನಿನ ಕ್ರಮ ಕೈಗೊಳ್ಳುವುದರ ಮೊದಲೇ ಸಾಲದಾತನು ಈ ಹಕ್ಕನು ಚಲಾಯಿಸಬಹುದು. 
3. ಒಮ್ಮೆ ಈ ರೀತಿ ಜಮೆಯನ್ನು ಸಾಲಕ್ಕೆ ಬಳಸಿಕೊಂಡ ಮೇಲೆ ಯಾವುದೇ ರೀತಿಯಲ್ಲೂ ಅದನ್ನು ಬದಲಾಯಿಸಲು ಆಗುವುದಿಲ್ಲ.

ಈ ಕ್ಲೇಟನ್ನಿನ ದಾವೆಯಲ್ಲಿ ಕಂಡು ಬಂದ ತೀರ್ಪಿನ ಸಾರಾಂಶವೇನೆಂದರೆ, 
ಯಾವುದೇ ಚಾಲ್ತಿ ಖಾತೆಯಲ್ಲಿ ಮೀರೆಳೆತವಾಗಿದ್ದು ಶಿಲ್ಕು ಖರ್ಚಿನದ್ದಾಗಿದ್ದಲ್ಲಿ, ಹಾಗೂ ಬರುವ ಜಮೆಯ ಬಗ್ಗೆ ಯಾವುದೇ ನಿಖರ ಸೂಚನೆಯಿಲ್ಲದಿದ್ದಲ್ಲಿ, ಖಾತೆಯಲ್ಲಿ ಬರುವ ಜಮೆಯು ಅದರಲ್ಲಿನ ಮೊದಲಿನ ಖರ್ಚನ್ನು ತೀರಿಸಿದಂತೆ ಭಾವಿಸಲಾಗುತ್ತದೆ.  
ಮೇಲಿನ ಉದಾಹರಣೆಯಲ್ಲಿ 12.03.04 ರಂದು ಜಮೆಯಾದ ಹಣದಲ್ಲಿ ಮೊದಲ ಖರ್ಚಾದ ರೂ.50,000/-ವು ಪಾವತಿಯಾದಂತೆ ಆಗುತ್ತದೆ. ಹಾಗೆಯೇ ಕ್ರಮವಾಗಿ ಬಂದ ಖರ್ಚುಗಳು ಬರುವ ಜಮೆ ಹಣದಲ್ಲಿ ಪಾವತೆಯಾದಂತೆ ಆಗುತ್ತದೆ. 

	ಇದೇ ರೀತಿ 1912 ರಲ್ಲಿ ಆದ ಡೀಲೇ ಹಾಗು ಲಾಯಿಡ್ಡ್ ಬ್ಯಾಂಕ್ಸ್ (1912) ಕ್ಲೇಟನ್ಸ್ ತತ್ತ್ವವನ್ನನುಸರಿಸಿ ತೀರ್ಪು ಬಂದಿತು. ಬ್ಯಾಂಕು ಎರಡನೇ ಅಡಮಾನ ತೆಗೆದುಕೊಂಡು ಅವರಿಗೆ ಮೀರೆಳೆತ ಸಾಲ ನೀಡಿತ್ತು. 

ಬ್ಯಾಂಕು ತನ್ನ ಗ್ರಾಹಕನ ಚಾಲ್ತಿ ಖಾತೆಯಲ್ಲಿನ ಮೀರೆಳೆತವನ್ನು ಭದ್ರಪಡಿಸಲೋಸುಗ ಎರಡನೇ ಅಡಮಾನವನ್ನು ಅವನಿಂದ ತೆಗೆದುಕೊಂಡಿತು. ಗ್ರಾಹಕನು ನಂತರ ತಾನು ಮೂರನೇ ಅಡಮಾನದಲ್ಲಿ ಬೇರೆಡೆ ಸಾಲ ತೆಗೆದುಕೊಂಡಿರುವುದನ್ನು ತಿಳಿಸಿದನು. ಬ್ಯಾಂಕು ತನ್ನ ಎರಡನೇ ಅಡಮಾನದ ಹಕ್ಕನ್ನು ಚಲಾಯಿಸಿ ತನ್ನ ಆಧಾರವನ್ನು ಭದ್ರ ಪಡಿಸಿಕೊಳ್ಳುವುದರೊಳಗಾಗಿ ಖಾತೆಯಲ್ಲಿ ಸಾಕಷ್ಟು ಜಮ ಬಂದು ಮೊದಲ ಖರ್ಚುಗಳು ಇದರಿಂದ ಕಳೆದು ಖಾತೆಯಲ್ಲಿ ಜಮೆ ಬಂದು ನಂತರ ಹೊಸ ಖರ್ಚುಗಳು ಬಂದಿದ್ದವು. ಈ ಹೊಸ ಮೀರೆಳೆತವು ಹೊಸ ಸಾಲದಂತಾಗಿ ಹಳೆಯ ಆಧಾರದ ಅಡಮಾನವು ಅದಕ್ಕೆ ಅನ್ವಯವಾಗುವಂತೆ ಬ್ಯಾಂಕು ದಾಖಲೆ, ಕ್ರಮ ಸರಿಯಾಗಿ ಕೈಗೊಳ್ಳದ್ದರಿಂದ ಮೂರನೆಯ ಅಡಮಾನವು ಮೊದಲ ಪ್ರಾಶಸ್ತ್ಯ ಗಳಿಸಿ ಬ್ಯಾಂಕಿನ ಆಧಾರವು ನಂತರದ್ದಾಯಿತು. ಕೊನೆಗೆ ಆ ಅಡಮಾನದ ಆಸ್ತಿಯ ವಿಲೇವಾರಿಯಿಂದ ಬಂದ ಹಣವು ಮೂರನೆ ಅಡಮಾನಕ್ಕೆ ಸಾಕಾಗಿ ಬ್ಯಾಂಕಿಗೆ ಏನೂ ಸಿಗಲಿಲ್ಲ. ದಾವೆಯು ಬಿದ್ದು ಹೋಯಿತು.
(ಜಿ.ಆರ್.ವಿ;ವೈ.ಕೆ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ